ನಮ್ಮ ಮಡಿಲು ಸಂಸ್ಥೆಯ " ಅಕ್ಷರ ಮಡಿಲು " ಕಾರ್ಯಕ್ರಮದಡಿಯಲ್ಲಿ ನಾವು ಶೈಕ್ಷಣಿಕ-ದತ್ತು ಪಡೆದ ಬಡಮಕ್ಕಳು, ಕೊಳಗೇರಿ (ಸ್ಲಂ) ಮಕ್ಕಳು , ಹಾಗು ಆರ್ಥಿಕವಾಗಿ ವಿದ್ಯಾಭ್ಯಾಸದ ಅವಶ್ಯಕತೆಗಳನ್ನು ತಲುಪಲಾಗದೆ ತಮ್ಮ ವ್ಯಾಸಂಗವನ್ನು ನಿಲ್ಲಿಸಿರುವ ಮಕ್ಕಳು, ಇಂತಹ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರಿಗೆ ಬ್ಯಾಗ್, ಪಠ್ಯಪುಸ್ತಕ, ಪೆನ್ ಮತ್ತು ಅವಶ್ಯಕ ಸ್ಟೇಷನರಿ ಗಳನ್ನು ವಿತರಿಸಲಾಗುವುದು
ಓದುವ ಆಸೆಗಳನ್ನು ಮರೆತು ಮನೆಯಲ್ಲಿನ ಬಡತನದ ಪರಿಣಾಮವಾಗಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು, ಓದುವ ಹಂಬಲವಿದ್ದರು ಕೇವಲ ಆರ್ಥಿಕ ದೌರ್ಬಲ್ಯದಿಂದ ಶಿಕ್ಷಣಾವಕಾಶ ವಂಚಿತರು ಹೀಗೆ ಹಲವಾರು ಶಿಕ್ಷಣಾಕಾಂಕ್ಷಿಗಳಿದ್ದಾರೆ ಅಂತಹ ಮಕ್ಕಳಿಗೆ ಈ ನಮ್ಮ ಯೋಜನೆ ತಲುಪಲಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಲಿ ಎಂಬ ಸಣ್ಣ ಪ್ರಯತ್ನ ನಮ್ಮದು....
ಬನ್ನಿ ನಮ್ಮೊಂದಿಗೆ ಕೈಜೋಡಿಸಿ ಮುಗ್ದ ಮಕ್ಕಳ ಓದುವ ಕನಸನ್ನು ನನಸಾಗಿಸೋಣ......
' ಮಡಿಲು '