ತುಮಕೂರಿನ ಶಂತಿನಗರದ ಸ್ಲಂ ನಲ್ಲಿ ನಮ್ಮ ಅಕ್ಷರ ಮಡಿಲು ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾದ ಅಲ್ಲಿನ ಹಂದಿ ಜೋಗಿ ಶಾಖೆಯ ಮಕ್ಕಳಿಗೆ ಉಚಿತ ಬ್ಯಾಗ್, ಮತ್ತು ಪುಸ್ತಕ ಗಳನ್ನು ವಿತರಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ನಾಗಭೂಷಣ ಬಗ್ಗನಡು ರವರು ನೆರವೇರಿಸಿದರು, ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ್ದಂತಹ ತುಮಕೂರು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳಾದ ರಮೇಶ್ ಎಂ ರವರು, ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ, ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅವರು ಮಡಿಲು ಸಂಸ್ಥೆಯು ಇಲ್ಲಿನ ಹಂದಿ ಜೋಗಿ ಜನಾಂಗದ ಮಕ್ಕಳನ್ನು ತಲುಪಿ ಅವರ ಶೈಕ್ಷಣಿಕ-ಅವಶ್ಯಕತೆಗಳನ್ನು ಅರಿತು ಅವರ ವಿದ್ಯಭ್ಯಾಸಕ್ಕೆ ನೆರವಾಗಿರುವುದು ಒಂದು ಸಾಧನೆ ಮತ್ತು ಶ್ಲಾಘನೀಯ ಕಾರ್ಯವಾಗಿದೆ ಹೀಗೆ ಸಂಘ ಸಂಸ್ಥೆಗಳು ಮುಂದೆ ಬಂದು ಪ್ರಾಮಾಣಿಕವಾಗಿ ಕಾರ್ಯನಿರ್ವಾಹಿಸಿದರೆ ಅನಕ್ಷರತೆ ನಿರ್ಮೂಲನೆ ಅಸಾಧ್ಯವೆನಲ್ಲ ಎಂದರು. ಕಾರ್ಯಕ್ರಮದಲ್ಲಿ ಶ್ರೀಮತಿ ರಾಮಕ್ಕ,ಜಿಲ್ಲಾ ಅಲೆಮಾರಿ ಸಂಘದ ಅಧ್ಯಕ್ಷರು, ಅಂಗವಿಕಲರ ಕಲ್ಯಾಣ ಇಲಾಖೆಯ ರೀತನ್ ಡಿ.ಎಸ್,ಬುಡುಗ ಜನಾಂಗದ ಮುಖ್ಯಸ್ಥ ವೆಂಕಟೇಶ್, ಹಾಗು ಸಂಸ್ಥೆಯ ಪದಾಧಿಕಾರಿಗಳಾದ ಶ್ರೀಮತಿ ಲಕ್ಷ್ಮಿ ,ಪ್ರಜಾವಾಣಿಯ ಅಬ್ರಹಾಂ, ಅರಸು,ಆನಂದ್ ಹಾಗು ಹಂದಿಜೋಗಿ ಶಾಖೆಯ ನಿವಾಸಿಗಳು ಭಾಗವಹಿಸಿದ್ದರು....
ದಿನಾಂಕ 24/03/2017 ರಂದು ಮಡಿಲು ಸಂಸ್ಥೆಯ ವತಿಯಿಂದ CIT ಕಾಲೇಜ್ ಗುಬ್ಬಿ ಯಲ್ಲಿ CMR ಯುನಿವರ್ಸಿಟಿ ಆಫ್ ಬೆಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯ ಸೇರಿದಂತೆ ವಿವಿದ ರಾಜ್ಯಗಳಿಂದ ಆಗಮಿಸಿದ್ದ MSW ಹಾಗು Psychology ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಶ್ರೀಮತಿ ವಾಸಂತಿ ಉಪ್ಪಾರ್ ರವರು ICDS,ICPS, JJ ACT, POCSO ACT, CWC, ಮಕ್ಕಳ ರಕ್ಷಣೆ, ಮಕ್ಕಳ ಸಾಗಾಣಿಕೆ, ಮಕ್ಕಳ ಹಕ್ಕುಗಳ ಕಾಯಿದೆ, ಮಕ್ಕಳ ದೌರ್ಜನ್ಯ ಕಾಯಿದೆ, ಬಾಲ್ಯವಿವಾಹ ಕಾಯಿದೆ ಇವೆಲ್ಲದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು.